|
|
| ಧ್ವನಿ > ಯೋಜನೆಗಳು > ಚಿತ್ರಣ |
ಚಿತ್ರಣ - ಹ೦ತ ೧
ಚಿತ್ರಣ ಯೋಜನೆಯು ಮೂಲತಃ ಸಂಪನ್ಮೂಲ ನಿರ್ಮಿತಿಯನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ರೂಪಿತವಾಗಿರುವ ಒಂದು ವಿಶೇಷ ಯೋಜನೆ. ಇದು ೨೦೦೪ ರಲ್ಲಿ ಆರಂಭವಾಗಿದ್ದು, ಈ ಯೋಜನೆಯ ಮೊದಲ ಹಂತವು ೨೦೦೬ರಲ್ಲಿ ಪೂರ್ಣಗೊಳ್ಳುತ್ತದೆ.
ಧ್ವನಿಯ ಇನ್ನಿತರ ಯೋಜನೆಗಳಿಗೆ (ಉದಾ: ಪೂರಣ, ಆರಂಭ) ಹಾಗೂ ಮುಂದಿನ ದಿನಗಳಲ್ಲಿ `ಧ್ವನಿ`ಯ ಗ್ರಂಥಗಳು, ಬೋಧನಾ ಸಾಮಗ್ರಿಗಳಿಗೆ ಅಗತ್ಯವಾಗಬಲ್ಲ ಮೂಲ/ಸ್ವಂತದ ಫೋಟೋಗಳನ್ನು ತೆಗೆಯುವ ಸಂಗ್ರಹಿಸುವ ಉದ್ದೇಶ ಹೊಂದಿದೆ.
ಕನ್ನಡ ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗೆ ತುಂಬ ಅಗತ್ಯವಾಗಿ ಬೇಕಿರುವ ಚಿತ್ರಸಹಿತ, ಅಧಿಕಾರಯುತ, ಸರ್ವ ರೀತಿಯಲ್ಲೂ ಶ್ರೀಮಂತವಾದ ಮತ್ತು ಆಕರ್ಷಕವಾದ ಆಧಾರಗ್ರಂಥಗಳ ಅಗತ್ಯವಿದೆ. ಅದಕ್ಕಾಗಿ, ಚಿತ್ರಣ ಯೋಜನೆಯಡಿಯಲ್ಲಿ ನಾವೇ ಸ್ವತಃ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸ್ಥಳಗಳಿಗೆ ಪ್ರವಾಸ ಹೋಗಿ, ಸ್ಥಳ ವೀಕ್ಷಣೆಯನ್ನು ಕೂಲಂಕಷವಾಗಿ ಮಾಡಿ, ಶೋಧಿಸಿ, ಪೋಟೋಗಳನ್ನು ತೆಗೆಯುತ್ತೇವೆ. ಇದರಿಂದ ಧ್ವನಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಗೆ ನಿಜವಾದ ಹಾಗೂ ನೇರವಾದ ಅನುಭವ ಆಧಾರಿತ ಕಲಿಕೆ ಕೂಡ ಸಾಧ್ಯವಾಗುತ್ತದೆ.
ಇದುವರೆಗೆ, ನಾವು ಕರ್ನಾಟಕದ ಬಹುಪಾಲು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸ್ಥಳಗಳನ್ನು ಸಂದರ್ಶಿಸಿ ಸಾವಿರಾರು ಫೋಟೋಗಳನ್ನು ತೆಗೆದಿದ್ದೇವೆ. ಮಕ್ಕಳ ಹಾಗೇ ನಾವು ಕೂಡ ಅನುಭವದ ಮೂಲಕವೇ ಕಲಿಯ ಬೇಕಿದೆ, ಅದಕ್ಕಾಗಿ, ನಾವು ಸಹ ಕ್ಷೇತ್ರ ಅಧ್ಯಯನ ಕೈಕೊಳ್ಳುವ ಮೂಲಕ ಅನುಭವ ಪಡೆದುಕೊಳ್ಳುವ ಮೂಲಕ ಕಲಿಯಬೇಕೆಂಬುದು ನಮ್ಮ ಬಲವಾದ ನಂಬಿಕೆ. ಚಿತ್ರಣವು ನಮ್ಮನ್ನು ಈ ದಿಸೆಯಲ್ಲಿ ಸದಾ ಕ್ರಿಯಾಶೀಲವಾಗಿ ಇಡುವ ಒಂದು ವಿಶಿಷ್ಠ ಯೋಜನೆಯಾಗಿದೆ.
ಚಿತ್ರಣ ಹಂತ-೧ ಕರ್ನಾಟಕವನ್ನು ಕೇಂದ್ರೀಕರಿಸಿದೆ. ಚಿತ್ರಣ ಹಂತ-೨ ಮತ್ತು ೩ ಮುಂದಿನ ದಿನಗಳಲ್ಲಿ ಜಾರಿಗೊಳಿಸಲು ಯೋಜಿಸಿದ್ದೇವೆ. ೨ನೆಯ ಹಂತದ ಚಿತ್ರಣದಲ್ಲಿ ದಕ್ಷಿಣ ಭಾರತ ಹಾಗೂ ೩ನೆಯ ಹಂತದ ಚಿತ್ರಣವು ಉತ್ತರ ಭಾರತವನ್ನು ಒಳಗೊಳ್ಳಲಿದೆ.
|
|
| |
Copyright © 2006. All rights reserved. Designed and maintained by Radius |