|
|
| ಧ್ವನಿ > ಪ್ರಕಟಣೆಗಳು |
ಪ್ರಕಟಣೆಗಳು
೧. ದೋಸೆ - ಪಾಸೆ
ಶಿಶುಪ್ರಾಸಗಳು ಮತ್ತು ಗೀತೆಗಳ ಸಂಗ್ರಹ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳು ತಮ್ಮ ತರಗತಿ ಬೋಧನಾ ಸಂದರ್ಭದಲ್ಲಿ ಸಂಗ್ರಹಿಸಿ ಉಪಯೋಗಿಸಿದ ಸಾಮಗ್ರಿ ಇದರಲ್ಲಿದೆ. ಮೊಟ್ಟಮೊದಲು ಇದನ್ನು ಎನ್.ಇ.ಜಿ. ಯ ಶಿಕ್ಷಕರಿಗಾಗಿ ಪ್ರಾಯೋಗಿಕವಾಗಿ ಪ್ರಕಟಿಸಲಾಯಿತು. ಉತ್ತಮ ಪ್ರತಿಕ್ರಿಯೆ ಶಿಕ್ಷಕರು ಮತ್ತು ಮಕ್ಕಳಿಂದ ಬಂದಿದ್ದು ಶೀಘ್ರದಲ್ಲಿ ಪರಿಷೃತ ಆವೃತ್ತಿ ಪ್ರಕಟಿಸಲಾಗಿದೆ.
೨. ಕನ್ನಡ ಕಲಿಕಾ ಮಾದರಿಗಳು ( ಕೈಪಿಡಿ ಸಹಿತ)
ರಚನೆ ಹಾಗೂ ವಿನ್ಯಾಸ:
ಶಿವಾನಂದ ಹೊಂಬಳ
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ
ಪ್ರಕಟಣೆ: ಅಂಕಿತ ಪ್ರಕಾಶನ
ಗಾಂಧಿ ಬಜಾರ ಬೆಂಗಳೂರು.
ಇದರಲ್ಲಿ ಕನ್ನಡ ಓದು ಬರಹ ಕಲಿಕೆ ಆರಂಭಿಕ ಹಂತದ ಮಕ್ಕಳಿಗೆ ಉಪಯುಕ್ತವಾದ ೨೫ ಅರ್ಧ ಸಿದ್ಧ ಮಾದರಿಗಳು ಇವೆ. ಅಲ್ಪ ಸಮಯ ಹಾಗೂ ಶ್ರಮದಲ್ಲಿ ಶಿಕ್ಷಕರು/ ಪಾಲಕರು ಇವುಗಳನ್ನು ಪೂರ್ಣಪ್ರಮಾಣದ ಮಾದರಿಗಳನ್ನು ಸಿದ್ಧಗೊಳಿಸಿಕೊಳ್ಳಬಹುದು. |
|
| |
Copyright © 2006. All rights reserved. Designed and maintained by Radius |